ಆಟೋ ಮೊಬೈಲ್ ವಲಯಗಳಲ್ಲಿ ಅಪಾರ ಕೀರ್ತಿಗಳಿಸಿರುವ ಪೋರ್ಷೆ ಹಾಗೂ ಬೋಯಿಂಗ್ ಕಂಪೆನಿಗಳು ನೂತನ ಕಾರ್ಯ ಯೋಜನೆಯನ್ನು ಹಾಕಿಕೊಂಡಿದ್ದು, ಹಾರುವ ಎಲೆಕ್ಟ್ರಾನಿಕ್ ಕಾರನ್ನು ತಯಾರಿಸಲು ಮುಂದಾಗಿದೆ. ಈ ಕುರಿತು ಇತ್ತೀಚೆಗೆ ಪತ್ರಿಕಾ ಗೋಷ್ಠಿ ನಡೆಸಿದ್ದು, ಪೋರ್ಷೆ ಮತ್ತು ಬೋಯಿಂಗ್ ಫ್ಲೈಯಿಂಗ್ ಕಾರನ್ನು ಅಭಿವೃದ್ಧಿಪಡಿಸುವ ನಿರ್ಧಾರ ಕೈಗೊಂಡಿದ್ದೇವೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದು, ಈ ಕಾರು ಸಂಪೂರ್ಣ ವಿದ್ಯುತ್ ಚಾಲಿತ ನಿಯಂತ್ರಣದಿಂದ ಕಾರ್ಯ ನಿರ್ವಹಿಸಲಿದೆಯಂತೆ. ಶ್ರೀಮಂತ ಐಷಾರಾಮಿ ಕಾರು ಖರೀದಿದಾರರನ್ನು ಗುರಿಯಾಗಿರಿಸಿಕೊಂಡು ಪ್ರೀಮಿಯಂ ಫ್ಲೈಯಿಂಗ್ ಕಾರನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಪೋರ್ಷೆ […]
↧