ನವದೆಹಲಿ: ಜಾಗತಿಕ ಬಡತನ ಉಪಶಮನದ ಕುರಿತ ಅಧ್ಯಯನಕ್ಕಾಗಿ ಭಾರತದ ಮೂಲದ ಅರ್ಥ ಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ, ಪತ್ನಿ ಎಸ್ತೆರ್ ಡ್ಯುಫ್ಲೋ ಹಾಗೂ ಮೈಕೇಲ್ ಕ್ರೇಮರ್ ಸೇರಿದಂತೆ ಮೂವರು ಪ್ರತಿಷ್ಠಿತ ಆರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬ್ಯಾನರ್ಜಿ ಎಲ್ಲಿಯವರು? ಅಭಿಜಿತ್ ವಿನಾಯಕ್ ಬ್ಯಾನರ್ಜಿ ಮೂಲತಃ ಕೋಲ್ಕತಾದವರು. ಪ್ರಸ್ತುತ ಬ್ಯಾನರ್ಜಿ ಅವರು ಮೆಸಾಚುಸೆಟ್ಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬ್ಯಾನರ್ಜಿ ಅವರು ಅಬ್ದುಲ್ ಲತೀಫ್ ಜಮೀಲ್ ಪವರ್ಟಿ ಆ್ಯಕ್ಷನ್ ಲ್ಯಾಬ್ ನ (ಪತ್ನಿ, ಅರ್ಥಶಾಸ್ತ್ರಜ್ಞೆ […]
↧