ಅವಸರದ ಬದುಕಿನಲ್ಲಿ ಎಲ್ಲವೂ ಫಾಸ್ಟ್ ಆಗಿ ಆಗಬೇಕೆಂಬ ಹೆಬ್ಬಯಕೆ ಎಲ್ಲರದ್ದೂ. ಹಾಗೆಯೇ ಸ್ಥೂಲ ಕಾಯದವರು ತಕ್ಷಣವೇ ತಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕೆಂಬ ಆಸೆ. ನಿರಂತರವಾಗಿ ಡಯಟ್ ಮಾಡುತ್ತಿದ್ದರೂ ತೂಕ ಮಾತ್ರ ಕಡಿಮೆಯಾಗುತ್ತಿಲ್ಲ ಎಂಬುದು ಹಲವರ ಆರೋಪ. ಆದರೆ ಈ ಆರೋಪ ಮಾಡುವ ಮುನ್ನ ನಾವು ತಿನ್ನುವ ಆಹಾರ ಹಾಗೂ ನಮ್ಮ ಅಭ್ಯಾಸಗಳ ಬಗ್ಗೆ ಕೊಂಚ ಗಮನ ಹರಿಸಬೇಕಾಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳುವ ಪ್ರಕ್ರಿಯೆ ಕೇವಲ ಒಂದೆರಡು ವಾರದಲ್ಲಾಗುವ ಕೆಲಸವಲ್ಲ. ಅದಕ್ಕೆ ಅದರದ್ದೇ ಆದ ಸಮಯ ತೆಗೆದುಕೊಳ್ಳುತ್ತದೆ. […]
↧