ಪಾಕಿಸ್ತಾನದಿಂದ ಭಾರತದ ಸೇನಾಧಿಕಾರಿಗಳು ಟಾರ್ಗೆಟ್ ಆಗಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದ್ದು, ತಮ್ಮ ವಾಟ್ಸಾಪ್ ಸೆಟ್ಟಿಂಗ್ ಬದಲಾಯಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಭಾರತೀಯ ಭೂಸೇನೆ ಸೂಚಿಸಿದೆ. ಪಾಕಿಸ್ತಾನದ ಬೇಹುಗಾರಿಕೆಯು ಭಾರತದ ಸೇನೆಯ ಸೂಕ್ಷ್ಮ ವಿಷಯಗಳನ್ನು ಕಲೆ ಹಾಕಲು ತಮ್ಮ ವಾಟ್ಸಾಪ್ ಗ್ರೂಪ್‌ನಲ್ಲಿ ಭಾರತದ ಸೇನೆಯ ಅಧಿಕಾರಿಗಳನ್ನು ಸೇರ್ಪಡೆ ಮಾಡುತ್ತಿದೆ. ಸೇನೆಯ ಇಬ್ಬರು ಅಧಿಕಾರಿಗಳು ಈ ಗ್ರೂಪ್‌ನಲ್ಲಿ ಸೇರ್ಪಡೆಯಾಗಿದ್ದು ಬೆಳಕಿಗೆ ಬಂದಿದೆ. ವಾಟ್ಸಾಪ್ ಗ್ರೂಪ್‌ನಲ್ಲಿ ತನ್ನಿಂತಾನೇ ಸೇರ್ಪಡೆಯಾಗುವ ಸೆಟ್ಟಿಂಗ್ ನಿಂದ ಆಗುವ ತೊಂದರೆ ಬಗ್ಗೆ ತಮ್ಮ ಸಿಬ್ಬಂದಿಗೆ ಸೇನೆ ಎಚ್ಚರಿಸಿದೆ.
↧