ನ್ಯೂ ಯಾರ್ಕ್(ನ. 23): ವಿಮಾನ ಆಗಸದಲ್ಲಿ ಹಾರುತ್ತಿರುವಾಗಲೇ ಹೊಟ್ಟೆನೋವಿನಿಂದ ಅತೀವ ನರಳಾಟ ನಡೆಸುತ್ತಿದ್ದ ವಯೋವೃದ್ಧರೊಬ್ಬರ ಪ್ರಾಣವನ್ನು ಅದೇ ವಿಮಾನದಲ್ಲಿದ್ದ ವೈದ್ಯರು ಉಳಿಸಿದ್ದಾರೆ. ವೃದ್ಧರ ಮೂತ್ರಕೋಶದಿಂದ 800 ಎಂಎಲ್ನಷ್ಟು ಮೂತ್ರ ಹೊರಸೆಳೆದು ಅವರ ಪ್ರಾಣ ಕಾಪಾಡಿದ್ದಾರೆ. ಚೀನಾದ ಗುವಾಂಗ್ಝೋದಿಂದ ಅಮೆರಿಕದ ನ್ಯೂ ಯಾರ್ಕ್ಗೆ ಹೋಗುತ್ತಿದ್ದ ಚೀನಾ ಸದರ್ನ್ ಏರ್ವೇಸ್ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನವು ನ್ಯೂ ಯಾರ್ಕ್ ತಲುಪಲು 6 ಗಂಟೆ ಇರುವ ಹೊತ್ತಿನಲ್ಲಿ ವೃದ್ಧರಿಗೆ ಹೊಟ್ಟೆ ನೋವಿನ ಯಾತನೆ ಶುರುವಾಗಿದೆ. ಹೊಟ್ಟೆನೋವಿನಿಂದಾಗಿ ಅವರಿಗೆಉಸಿರಾಡಲೂ ಕಷ್ಟವಾಗಿತ್ತು. ಆದರೆ […]
↧