63 ವರ್ಷದ ಆ ವ್ಯಕ್ತಿ ಆರೋಗ್ಯವಾಗಿಯೇ ಇದ್ದರು. ಆದರೆ, ಇದ್ದಕ್ಕಿದ್ದಂತೆಯೇ ಇವರು ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣ ಮನೆಯವರು ಆಸ್ಪತ್ರೆಗೆ ಕರೆತಂದು ದಾಖಲಿಸಿದರು. ತಪಾಸಣೆ ನಡೆಸಿದ ವೈದ್ಯರಿಗೂ ಮೊದಲು ಸಮಸ್ಯೆ ಏನೆಂದು ಪತ್ತೆ ಹಚ್ಚುವುದು ಕಷ್ಟವಾಗಿತ್ತು. ಆದರೆ, ಸೂಕ್ಷ್ಮ ತಪಾಸಣೆ ನಡೆಸಿದಾಗ ಗೊತ್ತಾಗಿದ್ದು ಆತಂಕಕಾರಿ ಸಂಗತಿ. ಅದೇನೆಂದರೆ, ಈ ವ್ಯಕ್ತಿ ಕ್ಯಾಪ್ನೋಸೈಟೋಫಾಗಾ ಬ್ಯಾಕ್ಟೀರಿಯಾದ ಸೋಂಕಿಗೊಳಗಾಗಿದ್ದರು. ಈ ಬ್ಯಾಕ್ಟೀರಿಯಾ ಹೆಚ್ಚಾಗಿ ನಾಯಿ ಮತ್ತು ಬೆಕ್ಕುಗಳ ಲಾಲಾರಸದಲ್ಲಿ ಕಂಡು ಬರುತ್ತದೆ. ಆದರೆ, ಈ ಸೋಂಕು ಮನುಷ್ಯರಿಗೆ ತಗುಲುವುದು ಅತೀ ವಿರಳಾತಿ ವಿರಳವಂತೆ. […]
↧