ಮ್ಯಾಡ್ರೀಡ್ : ವಿಶ್ವದೆಲ್ಲಡೆ ಹವಾಮಾನ ವೈಪರೀತ್ಯ ಬದಲಾವಣೆಗಳ ಕುರಿತು ತೀವ್ರ ಚರ್ಚೆ ನಡೆಯುತ್ತಿರುವ ನಡುವೆಯೇ ಮತ್ತೂಂದು ಆಘಾತಕಾರಿ ವಿಷಯ ಹೊರ ಬಿದ್ದಿದ್ದು, ಡಿಸೆಂಬರ್ ತಿಂಗಳ ಅಂತ್ಯದೊಳಗೆ ವಿಶ್ವದ 22 ದಶಲಕ್ಷ ಜನರನ್ನು ಸ್ಥಳಾಂತರಿಸಬೇಕಾಗುತ್ತದೆ ಎಂದು ಜಾಗತಿಕ ಹವಾಮಾನ ವರದಿ ತಿಳಿಸಿದೆ. ಡಿಸೆಂಬರ್ 3 ರಂದು ಮ್ಯಾಡ್ರೀಡ್ನಲ್ಲಿ ನಡೆದ ಸಮ್ಮೇಳನದಲ್ಲಿ (ಕೋಪ್ 25) ಈ ವಿಷಯವಾಗಿ ಚರ್ಚೆ ನಡೆದಿದೆ. ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಜಾಗತಿಕ ಹವಾಮಾನ 2019 ವರದಿಯನ್ನು ಬಿಡುಗಡೆ ಮಾಡಿದ್ದು, ಹವಾಮಾನ ವೈಪರೀತ್ಯದಿಂದಾಗುತ್ತಿರುವ ಹಲವಾರು ದುಷ್ಪರಿಣಾಮಗಳನ್ನು […]
↧