ಮೆಲ್ಬರ್ನ್: ಭಾರತ-ಪಾಕಿಸ್ಥಾನ ನಡುವಿನ ಪ್ರಕ್ಷುಬ್ಧ ಸ್ಥಿತಿಯ ನಡುವೆಯೇ “ಅಭಿಮಾನದ ಸಂಬಂಧ’ವೊಂದಕ್ಕೆ ಕ್ರಿಕೆಟ್ ನಿದರ್ಶನವಾಗಿದೆ. ಪಾಕಿಸ್ಥಾನದ ಬೌಲರ್ ಓರ್ವ ಭಾರತದ ಭದ್ರತಾ ಸಿಬಂದಿಗೆ ಚೆಂಡನ್ನು ಉಡುಗೊರೆಯಾಗಿ ನೀಡುವ ಮೂಲಕ ಕ್ರೀಡಾಪ್ರಿಯರ ಹೃದಯ ಗೆದ್ದಿದ್ದಾರೆ. ಇದಕ್ಕೆ ನಿದರ್ಶನವಾದದ್ದು ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ “ಬಿಗ್ ಬಾಶ್ ಲೀಗ್’ ಕ್ರಿಕೆಟ್ ಪಂದ್ಯಾವಳಿ. ಮೆಲ್ಬರ್ನ್ ಸ್ಟಾರ್ ತಂಡದ ಪಾಕಿಸ್ಥಾನಿ ಬೌಲರ್ ಹ್ಯಾರಿಸ್ ರವೂಫ್ ಹರಿಕೇನ್ಸ್ ತಂಡದ ವಿರುದ್ಧ 27 ರನ್ ವೆಚ್ಚದಲ್ಲಿ 5 ವಿಕೆಟ್ ಉಡಾಯಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ರವೂಫ್ ದಾಳಿಗೆ ತತ್ತರಿಸಿದ ಹರಿಕೇನ್ಸ್ […]
↧