ಕ್ಯಾನ್ ಬೆರ್ರಾ: ಬಿರುಬೇಸಿಗೆಗೆ ಆವರಿಸಿರುವ ಆಸ್ಟ್ರೇಲಿಯಾದಲ್ಲಿ ನೀರಿನ ಅಭಾವ ಮತ್ತು ಕಾಳ್ಗಿಚ್ಚು ನಂದಿಸಲು ಬೇಕಾದ ನೀರನ್ನು ಉಳಿಸುವ ನಿಟ್ಟಿನಲ್ಲಿ ಆಸ್ಟ್ರೇಲಿಯಾ ಸರ್ಕಾರ ಕೈಗೊಂಡಿದ್ದ ಐದು ದಿನಗಳ ಹೆಲಿಕಾಪ್ಟರ್ ಕಾರ್ಯಾಚರಣೆಯಲ್ಲಿ ಐದು ಸಾವಿರ ಒಂಟೆಗಳನ್ನು ಕೊಲ್ಲಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ದಕ್ಷಿಣ ಆಸ್ಟ್ರೇಲಿಯಾದ ಬುಡಕಟ್ಟು ಮುಖಂಡರ ಹೇಳಿಕೆ ಪ್ರಕಾರ, ಬರಗಾಲ ಮತ್ತು ಅತೀಯಾದ ಬೇಸಿಗೆಯಿಂದಾಗಿ ಸಾವಿರಾರು ಒಂಟೆಗಳು ಗ್ರಾಮೀಣ ಜನವಸತಿಯತ್ತ ಆಗಮಿಸಿ ನೀರು ಮತ್ತು ಆಹಾರಕ್ಕಾಗಿ ಹುಡುಕಾಡುತ್ತಿದ್ದು, ಇದರಿಂದಾಗಿ ಮೂಲಭೂತ ಸೌಕರ್ಯಗಳೆಲ್ಲಾ ಹಾಳಾಗಿ ಹೋಗಿದೆ ಎಂದು ದೂರಿದ್ದಾರೆ. […]
↧