ಇಸ್ಲಾಮಾಬಾದ್: ಮಿಡತೆ ದಾಳಿಗೆ ತತ್ತರಿಸಿರುವ ಪಾಕಿಸ್ತಾನ, ಪಂಜಾಬ್ ಪ್ರಾಂತ್ಯದಲ್ಲಿ ಭಾರಿ ಪ್ರಮಾಣದಲ್ಲಿ ಬೆಳೆ ಹಾನಿಯುಂಟು ಮಾಡುತ್ತಿರುವ ಕೀಟಗಳನ್ನು ನಿಯಂತ್ರಿಸಲು ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೆ ಈ ಬಿಕ್ಕಟ್ಟಿನಿಂದ ಹೊರಬರಲು 7.3 ಬಿಲಿಯನ್ ಮೊತ್ತದ ರಾಷ್ಟ್ರೀಯ ಕ್ರಿಯಾ ಯೋಜನೆ (ಎನ್‌ಎಪಿ)ಗೆ ಅನುಮೋದನೆ ನೀಡಿದೆ. ಈ ಸಭೆಯಲ್ಲಿ ಫೆಡರಲ್ ಮಂತ್ರಿಗಳು ಹಾಗೂ ನಾಲ್ಕು ಪ್ರಾಂತ್ಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ರಾಷ್ಟ್ರೀಯ […]
↧