ದುಬಾರಿಯಾಗಿದ್ದ ಚಿನ್ನದ ಬೆಲೆ ದಿನ ಕಳೆದಂತೆ ಕುಸಿಯುತ್ತಿದ್ದು ಬುಧವಾರವೂ ಹಳದಿ ಲೋಹದ ಬೆಲೆ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಬೆಲೆಯನ್ನು ನಿರ್ಧರಿಸಲಾಗುವುದು. ಅಂತೆ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 128 ರುಪಾಯಿ ಇಳಿಕೆಯಾಗಿದ್ದು 10 ಗ್ರಾಂಗೆ 41,148 ರುಪಾಯಿ ಆಗಿದೆ. ಇನ್ನು ಬೆಳ್ಳಿ 700 ರುಪಾಯಿ ಇಳಿಕೆಯಾಗಿದ್ದು 1 ಕೆಜಿ ಬೆಳ್ಳಿ ಬೆಲೆ 46,360 ರುಪಾಯಿ ಆಗಿದೆ.
↧