ಬೀಜಿಂಗ್/ಹೊಸದಿಲ್ಲಿ: ಮಾರಕ ಸೋಂಕು ಶುರುವಾದ ಚೀನದ ಹ್ಯುಬೆ ಪ್ರಾಂತ್ಯದ ವುಹಾನ್‌ನಲ್ಲಿ ಜನಜೀವನ ಮತ್ತು ವಾಣಿಜ್ಯಿಕ ಚಟುವಟಿಕೆಗಳು ನಿಧಾನವಾಗಿ ಶುರುವಾಗಿವೆೆ. ಅದಕ್ಕೆ ಪೂರಕವಾಗಿ ಕೆಲವು ಕಂಪೆನಿಗಳ ಕಚೇರಿ ತೆರೆದು, ಕಾರ್ಯಾರಂಭಕ್ಕೆ ಚೀನ ಸರಕಾರ ಅನುಮತಿ ನೀಡಿದೆ. ಮಾ.20ರ ಬಳಿಕ ಇನ್ನೂ ಹಲವು ಕಂಪೆನಿಗಳು ಕೆಲಸ ಶುರು ಮಾಡಲಿವೆ. ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿಯ ಬಳಿಕ ಈ ನಿರ್ಧಾರ ಪ್ರಕಟಿಸಲಾಗಿದೆ. ಜ.23ರ ಬಳಿಕ ಆ ಪ್ರಾಂತ್ಯದಲ್ಲಿ ಸಂಪೂರ್ಣ ವಹಿವಾಟು ಸ್ಥಗಿತಗೊಂಡಿತ್ತು. ಇತ್ತೀಚಿನ ದಿನಗಳಲ್ಲಿ ವುಹಾನ್‌ನಲ್ಲಿ ಹೊಸ ಪ್ರಕರಣಗಳು ವರದಿಯಾಗುವುದು ಕಡಿಮೆಯಾಗಿದೆ. […]
↧