ವಾಷಿಂಗ್ಟನ್/ನವದೆಹಲಿ: ಜಾಗತಿಕ ಆರೋಗ್ಯ ವ್ಯವಸ್ಥೆಯನ್ನೇ ಬುಡಮೇಲು ಮಾಡಿರುವ ಕೋವಿಡ್ 19 ಈಗ ವಿಶ್ವದ ಮೂಲೆ ಮೂಲೆಗಳನ್ನೂ ಶಟ್ ಡೌನ್ ಮಾಡಿಸಿದೆ. ಜಗತ್ತಿನೆಲ್ಲೆಡೆ ಹಾದಿ-ಬೀದಿಗಳು, ಹೆದ್ದಾರಿಗಳು, ಮನರಂಜನಾ ತಾಣಗಳು, ಪ್ರವಾಸಿ ಸ್ಥಳಗಳು ಜನಸಂಚಾರವಿಲ್ಲದೆ, ಭಣಗುಡುತ್ತಿವೆ. ವಿಮಾನ ಸಂಚಾರಗಳು ಸ್ಥಗಿತಗೊಂಡಿರುವ ಕಾರಣ, ದೇಶ-ದೇಶಗಳ ನಡುವೆ ಸಂಪರ್ಕವೇ ಇಲ್ಲದಂತಾಗಿದೆ. ಕಚೇರಿ ಸಭೆಗಳಿಗೆಂದು, ದುಡಿಯಲೆಂದು, ಪ್ರವಾಸಕ್ಕೆಂದು ವಿದೇಶಗಳಿಗೆ ತೆರಳಿದವರು ವಾಪಸ್ ಸ್ವದೇಶಕ್ಕೆ ಮರಳಲು ಸಾಧ್ಯವಾಗದೇ ಅತಂತ್ರರಾಗಿದ್ದಾರೆ. ಒಟ್ಟಾರೆ ಸುಮಾರು 7 ಕೋಟಿ ಜನಸಂಖ್ಯೆಯಿರುವ ಅಮೆರಿಕದ ನ್ಯೂಯಾರ್ಕ್, ಕ್ಯಾಲಿಫೋರ್ನಿಯಾ ಮತ್ತು ಇಲಿನಾಯ್ಸಗಳಲ್ಲಿ ಜನರು ಮನೆಗಳಲ್ಲೇ […]
↧