ಲಂಡನ್: ಚಿಟ್ಟೆಯ ರಂಗು, ಅದರ ಹಾರಾಟ, ರೆಕ್ಕೆ ಬಡಿಯುವ ಪರಿಯನ್ನು ನೋಡಿ ನಾವೆಲ್ಲ ಆನಂದಿಸುತ್ತೇವೆ. ಇನ್ನು ಕವಿ ಮನಸ್ಸಿನವರಿದ್ದರಂತೂ ಸ್ಪೂರ್ತಿಯೊಂದಿಗೆ ಒಂದಷ್ಟು ಸಾಲುಗಳನ್ನು ಗೀಚಿ ಖುಷಿಪಡುತ್ತಾರೆ. ಆದರೆ, ವಿಜ್ಞಾನಿಗಳಿಗೆ ಇದರ ಹಾರಾಟವೇ ಹೊಸ ಸಂಶೋಧನೆಗೆ ಪ್ರೇರೆಣೆ ನೀಡಿದೆ. ಕಡಿಮೆ ವೆಚ್ಚದಲ್ಲಿ ಸೌರ ವಿದ್ಯುತ್ ಉತ್ಪಾದಿಸಲು ನೆರವಾಗುವ ಹೊಸ ಸಂಶೋಧನೆಗೆ ಚಿಟ್ಟೆಯೇ ಸ್ಫೂರ್ತಿಯಾಗಿದೆ. ಚಿಟ್ಟೆ ಹಾರುವ ಮುನ್ನ ತನ್ನ ರೆಕ್ಕೆಗಳನ್ನು ಇಂಗ್ಲಿಷ್ ಅಕ್ಷರ ‘ವಿ’ ಆಕಾರದಲ್ಲಿ ಜೋಡಿಸಿಕೊಳ್ಳುತ್ತದೆ. ಇದು ಚಿಟ್ಟೆಗೆ ಬಹುಬೇಗ ಹಾರುವ ಶಕ್ತಿಯನ್ನು ನೀಡುತ್ತದೆ. ಈ ಅಂಶ […]
↧