ವಿಶ್ವದಲ್ಲಿಯೇ ಅತಿ ದೀರ್ಘಕಾಲ ವೈವಾಹಿಕ ಜೀವನವನ್ನು ಸಾಗಿಸಿದ ಹೆಗ್ಗಳಿಕೆಗೆ ಭಾರತೀಯ ಮೂಲದ ದಂಪತಿ ಪಾತ್ರರಾಗಿದ್ದಾರೆ. ಪ್ರಸ್ತುತ ಲಂಡನ್ ನಿವಾಸಿಗಳಾದ 100ಕ್ಕಿಂತ ಹೆಚ್ಚು ವಯಸ್ಸಿನ ದಂಪತಿಗಳು ಇತ್ತೀಚಿಗೆ ಜಂಟಿಯಾಗಿ ತಮ್ಮಿಬ್ಬರ ಜನ್ಮದಿನವನ್ನಾಚರಿಸಿಕೊಂಡರು. ಬರೊಬ್ಬರಿ 89 ವರ್ಷಗಳ ಹಿಂದೆ ಅಂದರೆ ಡಿಸೆಂಬರ್ 11, 1925ರಲ್ಲಿ ಅವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕಳೆದ ಭಾನುವಾರ ಈ ಆದರ್ಶ ದಂಪತಿಗಳು ಹದಿಹರೆಯದವರನ್ನು ನಾಚಿಸುವಂತೆ ಜನ್ಮದಿನವನ್ನು ಆಚರಿಸಿಕೊಂಡರು. ಮಾರ್ಗರೆಟ್ ಥ್ಯಾಚರ್ ಜನಿಸಿದ್ದ ವರ್ಷದಲ್ಲಿಯೇ ಅವರಿಬ್ಬರ ವಿವಾಹವಾಗಿತ್ತು . ಆ ಸಮಯದಲ್ಲಿ ಸ್ಟಾನ್ಲಿ ಬಾಲ್ಡ್ವಿನ್ ಬ್ರಿಟಿಷ್ ಪ್ರಧಾನಿಯಾಗಿದ್ದರು. […]
↧