ಲಂಡನ್: ತೀವ್ರ ಬಡತನದಿಂದ ಹಬ್ಬ ಹರಿದಿನಗಳಂದೂ ಉಪವಾಸ-ವನವಾಸ ಅನುಭವಿಸುವುದು ಬಡರಾಷ್ಟ್ರಗಳಿಗೆ ಸೀಮಿತವಲ್ಲ. ಅಭಿವೃದ್ಧಿ ಹೊಂದಿದ ದೇಶವೆಂದು ಖ್ಯಾತಿವೆತ್ತಿರುವ ಬ್ರಿಟನ್ನಲ್ಲೂ ಇಂತಹ ಮನಕಲಕುವ ಘಟನೆ ವರದಿಯಾಗಿದೆ. ತೀವ್ರ ಹಣಕಾಸಿನ ಮುಗ್ಗಟ್ಟಿನಿಂದ ಬಳಲುತ್ತಿರುವ ತಾಯಿಯೊಬ್ಬಳು, ಕ್ರಿಸ್ಮಸ್ ಹಬ್ಬದ ಆಚರಣೆಗೆ ದುಡ್ಡು ಸಂಪಾದಿಸಲು ತನ್ನ ಎದೆ ಹಾಲನ್ನೇ ಮಾರಿದ್ದಾಳೆ. ರೆಬೆಕ್ಕಾ ಹಡ್ಸನ್ ಎಂಬ 26 ವರ್ಷದ ಮಹಿಳೆಗೆ ನಾಲ್ಕು ಮಕ್ಕಳು. ಮ್ಯಾಂಚೆಸ್ಟರ್ ನಿವಾಸಿಯಾದ ಈಕೆಗೆ ಹಣಕಾಸಿನ ತೀವ್ರ ಅಡಚಣೆ ಕಾಡುತ್ತಿತ್ತು. ಹೇಳಿಕೇಳಿ ಇದು ಡಿಸೆಂಬರ್ ತಿಂಗಳು. ಕ್ರಿಸ್ಮಸ್ ಹಬ್ಬ ಮುಂದಿದೆ. ಆದರೆ, […]
↧