ಲಂಡನ್: ಬಾಯಿ ಚಪಲಕ್ಕೆ ಸಿಕ್ಕಿದ್ದನ್ನೆಲ್ಲಾ ತಿಂದು ತೇಗುವವರು ನೀವಾಗಿದ್ದರೆ ಸ್ವಲ್ಪ ಎಚ್ಚರದಿಂದಿರಿ. ಇಲ್ಲಾಂದ್ರೆ ಸಾವು ನಿಮ್ಮನ್ನೂ ಬಂದು ಕಾಡಬಹುದು. ಹೌದು, ಲಂಡನ್‍ನಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ತಿಂದು ತಿಂದು 254 ಕೆಜಿ ತೂಕ ತಲುಪಿದ್ದ 20 ವರ್ಷದ ಸಮಂತಾ ಪ್ಯಾಕ್‍ಹಾಮ್ ಎಂಬ ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ. ಸಮಂತಾ ತಿನ್ನುವ ಚಟಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಆಕೆಯ ಪೋಷಕರು ಕಳೆದ ಮೂರು ವರ್ಷದಿಂದ ಆಕೆಯನ್ನು ಮನೆಯಿಂದ ದೂರವಿಟ್ಟಿದ್ದರು. ಮಿತಿ ಮೀರಿ ತಿನ್ನುತ್ತಿದ್ದುದರಿಂದ ಸಮಂತಾಳ ಹಲವು ಅಂಗಾಂಗಗಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದವು. […]
↧