ಹೃದಯದ ಅಂಗರಚನೆ ಅಧ್ಯಯನಕ್ಕೆ ಇಕೋ ಕಾರ್ಡಿಯೋಗ್ರಾಮ್ ಅತ್ಯಂತ ಪ್ರಯೋಜನಕಾರಿ. ಇದರಲ್ಲಿ ದೇಹದೊಳಗೆ ಯಾವುದೇ ಸಲಕರಣೆ ತೂರಿಸುವ ಪ್ರಕ್ರಿಯೆ ಇಲ್ಲ ಮತ್ತು ಅತ್ಯಂತ ಸುರಕ್ಷಿತ. ಸೂಕ್ತವಾಗಿ ತರಬೇತಿ ಹೊಂದಿದ ತಜ್ಞರು ಇದನ್ನು ನಡೆಸಿದಲ್ಲಿ ಅತ್ಯಂತ ನಿಖರ ಫಲಿತಾಂಶವೂ ದೊರೆಯುತ್ತದೆ. ಇಕೋ ಕಾರ್ಡಿಯೋಗ್ರಾಂ ಹೇಗೆ ನಿರ್ವಹಿಸಲಾಗುತ್ತದೆ? ರೋಗಿಯನ್ನು ಬೆಡ್ ಅಥವಾ ಪರೀಕ್ಷಾ ಟೇಬಲ್ ಮೇಲೆ ಮಲಗಿಸಲಾಗುತ್ತದೆ. ಇಕೋ ತಂತ್ರಜ್ಞ ಒಂದು ಟ್ರಾನ್ಸ್‌ಡ್ಯೂಸರ್ (ಕಂಪ್ಯೂಟರ್ ಮೌಸ್‌ನಂತೆ ಕಾಣಿಸುವ) ಒಂದನ್ನು ಎದೆ ಭಾಗದಲ್ಲಿ ಇರಿಸುತ್ತಾನೆ. ಎದೆಭಾಗದಲ್ಲಿ ಈ ಟ್ರಾನ್ಸ್‌ಡ್ಯೂಸರನ್ನು ಅತ್ತಿಂದಿತ್ತ ಚಲಿಸಲಾಗುತ್ತದೆ, ಈ […]
↧