ಪೇಶಾವರ, ಡಿ. 17: ಒಳ್ಳೆಯ ತಾಲಿಬಾನ್ ಅಥವಾ ಕೆಟ್ಟ ತಾಲಿಬಾನ್ ಎಂಬ ಭೇದಭಾವ ಮಾಡದೆ ಭಯೋತ್ಪಾದನೆ ವಿರುದ್ಧ ಹೋರಾಡಲು ಒಂದು ವಾರದಲ್ಲಿ ರಾಷ್ಟ್ರೀಯ ಯೋಜನೆಯೊಂದನ್ನು ರೂಪಿಸಲಾಗುವುದು ಎಂದು ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಇಂದು ಘೋಷಿಸಿದ್ದಾರೆ. ಪೇಶಾವರದ ಸೇನಾ ಶಾಲೆಯೊಂದರ ಮಕ್ಕಳ ಮೇಲೆ ತಾಲಿಬಾನಿಗಳು ಅತ್ಯಂತ ಪೈಶಾಚಿಕ ದಾಳಿ ನಡೆಸಿದ ಒಂದು ದಿನದ ಬಳಿಕ ಪಾಕ್ ಪ್ರಧಾನಿಯ ಘೋಷಣೆ ಹೊರಬಿದ್ದಿದೆ. ದಾಳಿಯಲ್ಲಿ 148 ಮಂದಿ ಮೃತರಾಗಿದ್ದಾರೆ. ಅವರ ಪೈಕಿ ಹೆಚ್ಚಿನವರು ಮಕ್ಕಳು. ಮಕ್ಕಳ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಇಲ್ಲಿ […]
↧