ಕರಾಚಿ: ಇಂಡೋನೇಷ್ಯಾ ಪೊಲೀಸರ ಬಲೆಗೆ ಬಿದ್ದ ಭೂಗತ ದೊರೆ ಚೋಟಾ ರಾಜನ್ನನ್ನು ದೀಪಾವಳಿ ಹಬ್ಬದೊಳಗೆ ಹತ್ಯೆ ಮಾಡುವುದಾಗಿ ದಾವೂದ್ ಇಬ್ರಾಹಿಂ ಸಹಚರ ಚೋಟಾ ಶಕೀಲ್ ಪ್ರತಿಜ್ಞೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಳೆದ 1993ರಲ್ಲಿ ನಡೆದ ಮುಂಬೈ ಸರಣಿ ಸ್ಫೋಟದ ನಂತರ ದಾವೂದ್ ಇಬ್ರಾಹಿಂ ಗ್ಯಾಂಗ್ ತೊರೆದು ಪ್ರತ್ಯೇಕ ತಂಡ ಕಟ್ಟಿದ್ದ ಚೋಟಾ ರಾಜನ್, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವುದು ಪೊಲೀಸರಿಗೆ ಶರಣಾಗಲು ಮೂಲಕಾರಣವಾಗಿದೆ ಎನ್ನಲಾಗಿದೆ. ಗ್ಯಾಂಗ್ನಿಂದ ಬೇರೆಯಾದ ನಂತರದಿಂದ ರಾಜನ್ ಹತ್ಯೆಗೆ ಶಕೀಲ್ ಪ್ರಯತ್ನಿಸುತ್ತಿದ್ದಾನೆ ಎನ್ನಲಾಗಿದೆ. […]
↧