ಮುಂಬೈ (ಪಿಟಿಐ): ಭೂಗತ ಪಾತಕಿ ಛೋಟಾ ರಾಜನ್ ಗಡೀಪಾರು ಪ್ರಕ್ರಿಯೆ ಪೂರ್ಣಗೊಂಡಿದ್ದು, ಆತನನ್ನು ವಶಕ್ಕೆ ಪಡೆಯಲು ಇಂಡೊನೇಷ್ಯಾಕ್ಕೆ ಹೋಗಿರುವ ಸಿಬಿಐ ಮತ್ತು ಪೊಲೀಸ್ ಅಧಿಕಾರಗಳ ತಂಡ ಶೀಘ್ರದಲ್ಲೇ ಆತನನ್ನು ಮುಂಬೈಗೆ ಕರೆತರಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮಂಗಳವಾರ ಇಲ್ಲಿ ಹೇಳಿದರು. ಛೋಟಾ ರಾಜನ್ನನ್ನು ಇಂದು (ಮಂಗಳವಾರ) ಮುಂಬೈಗೆ ಕರೆತರಲಾಗುತ್ತಿದೆಯೇ ಎನ್ನುವುದೂ ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರ ನೀಡಲು ಅವರು ನಿರಾಕರಿಸಿದರು. ಈ ವಿಚಾರವಾಗಿ ಮುಂಬೈ ಪೊಲೀಸ್ ಆಯುಕ್ತ ಅಹಮದ್ ಜಾವೇದ್ ಅವರು ಶೀಘ್ರದಲ್ಲೇ ಮಾಧ್ಯಮಕ್ಕೆ […]
↧