ಬಾಲಿ, ಇಂಡೊನೇಷ್ಯಾ: ಮುಂಬೈ ಪೊಲೀಸ್ ಇಲಾಖೆಯ ‘ಕೆಲವು ಸದಸ್ಯರು’ ದಾವೂದ್ ಇಬ್ರಾಹಿಂ ಅವರ ನಂಟು ಹೊಂದಿದ್ದಾರೆ ಎಂದು ಬಂಧನದಲ್ಲಿರುವ ಭೂತಗ ಪಾತಕಿ ಛೋಟಾ ರಾಜನ್ ಮಂಗಳವಾರ ಹೇಳಿದ್ದಾನೆ. ‘ಮುಂಬೈ ಪೊಲೀಸ್ನ ಕೆಲವು ಸದಸ್ಯರು ದಾವೂದ್ ಜತೆಗೆ ಸಂಪರ್ಕ ಹೊಂದಿದ್ದಾರೆ. ದಾವೂದ್ ಹಾಗೂ ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ನಾನು ಮುಂದುವರೆಸುತ್ತೇನೆ. ನಾನು ದಾವೂದ್ಗೆ ಹೆದರುವುದಿಲ್ಲ’ ಎಂದು ರಾಜನ್ ಸ್ಪಷ್ಟಪಡಿಸಿದ್ದಾನೆ. ದಾವೂದ್ನ ಒಂದು ಕಾಲದ ಆಪ್ತನಾಗಿದ್ದ ರಾಜನ್, 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಘಟನೆಯ ಬಳಿಕ ಆತನಿಂದ ಬೇರ್ಪಟ್ಟಿದ್ದ. […]
↧