ಟೊಕಿಯೋ: ಜಪಾನ್‍ನಲ್ಲಿ ರಿಕ್ಟರ್ ಮಾಪಕ 7.0 ರಷ್ಟು ತೀವ್ರತೆಯ ಪ್ರಬಲ ಭೂಕಂಪನವಾಗಿದ್ದು, ಭೀಕರ ಸುನಾಮಿಯ ಭೀತಿ ಸಹ ಎದುರಾಗಿದೆ. ನೈರುತ್ಯ ತೀರದ ಖಗೋಶಿಮಾ ಹಾಗೂ ರೇಕ್ಯು ದ್ವೀಪಗಳಲ್ಲಿ ಭೂಕಂಪ ಸಂಭವಿಸಿದ್ದು, ಇದರ ಬೆನ್ನಲ್ಲೆ ಹವಾಮಾನ ಇಲಾಖೆ ಸುನಾಮಿಯ ಎಚ್ಚರಿಕೆಯನ್ನು ನೀಡಿದೆ.ಜಪಾನ್ ನೈಋತ್ಯ ಭಾಗದ ಮಕುರಝಕಿಯ 160 ಕಿಲೋಮೀಟರ್ ದೂರದಲ್ಲಿ ಕಂಪನ ಕೇಂದ್ರ ಕೇಂದ್ರೀಕೃತವಾಗಿತ್ತು ಎಂದು ತಿಳಿದು ಬಂದಿದೆ. ಇದುವರೆಗೆ ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ. 2011ರಲ್ಲಿ ಈ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ್ದಾಗ ಎದ್ದಿದ್ದ ಸುನಾಮಿಗೆ 18,000 ಜನರು […]
↧