ಟರ್ಕಿ: ಜಗತ್ತಿನ ಕೆಲ ರಾಷ್ಟ್ರಗಳು ಈಗಲೂ ಭಯೋತ್ಪಾದನೆಯನ್ನೇ ತಮ್ಮ ರಾಜನೀತಿಯ ಅಸ್ತ್ರವನ್ನಾಗಿಸಿಕೊಂಡಿವೆ’ ಎಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಅಂಟಾಲ್ಯದಲ್ಲಿ ಇಂದು ಜಿ20 ಶೃಂಗಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ‘ಭಯೋತ್ಪಾದಕತೆಯನ್ನು ಧರ್ಮದಿಂದ ಬೇರ್ಪಡಿಸಿ ನೋಡಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತ, ಉಗ್ರವಾದವನ್ನು ರಾಜನೀತಿಯ ಅಸ್ತ್ರವಾಗಿಸಿಕೊಂಡಿರುವ ರಾಷ್ಟ್ರಗಳ ವಿರುದ್ಧ ಯಾವುದೇ ರಾಜಕೀಯ ರಾಜಕೀಯ ವಿಚಾರಗಳನ್ನು ಪರಿಗಣಿಸದೆ ಕ್ರಮ ಕೈಗೊಳ್ಳಬೇಕಿದೆ,’ ಎಂದು ಮನವಿ ಮಾಡಿಕೊಂಡಿದ್ದಾರೆ. ‘ಭಯೋತ್ಪಾದನೆ ಎಲ್ಲದಕ್ಕಿಂತ ಮುಖ್ಯ ಜಾಗತಿಕ ಸಮಸ್ಯೆಯಾಗಿದ್ದು, ಸಂಘಟಿತ ಹೋರಾಟದಿಂದ ಭಯೋತ್ಪಾದನೆಯನ್ನು ಬುಡಸಮೇತ ತೊಡೆದು ಹಾಕಬೇಕು’ ಎಂದು […]
↧