ಬೊಮಾಕೊ, ನ.20: ಪ್ಯಾರಿಸ್ ದಾಳಿಯ ಆಘಾತದಿಂದ ಜಗತ್ತು ಚೇತರಿಸಿಕೊಳ್ಳುತ್ತಿರುವಾಗಲೇ, ಶುಕ್ರವಾರ ಪಶ್ಚಿಮ ಆಫ್ರಿಕದ ರಾಷ್ಟ್ರವಾದ ಮಾಲಿಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಮಾಲಿಯ ರಾಜಧಾನಿ ಬೊಮಾಕೊದ ಹೊಟೇಲೊಂದರಲ್ಲಿ ದಾಳಿ ನಡೆಸಿದ ಬಂದೂಕುಧಾರಿ ಉಗ್ರರು 170ಕ್ಕೂ ಅಧಿಕ ಮಂದಿಯನ್ನು ಒತ್ತೆಸೆರೆಯಲ್ಲಿರಿಸಿ ಅವರಲ್ಲಿ ಕನಿಷ್ಠ 27 ಮಂದಿಯನ್ನು ಹತ್ಯೆಗೈದಿದ್ದಾರೆ. ಅನಂತರ ಮಾಲಿಯ ವಿಶೇಷ ಭದ್ರತಾಪಡೆಗಳ ನೇತೃತ್ವದಲ್ಲಿ ಹೊಟೇಲ್‌ನೊಳಗೆ ನಡೆದ ಕಮಾಂಡೊ ಕಾರ್ಯಾಚರಣೆಯಲ್ಲಿ 150ಕ್ಕೂ ಅಧಿಕ ಮಂದಿಯನ್ನು ಬಂಧಮುಕ್ತಿಗೊಳಿಸಲಾಗಿದೆ ಹಾಗೂ ದಾಳಿಕೋರ ಉಗ್ರರಿಬ್ಬರಿನ್ನು ಹತ್ಯೆಗೈಯ್ಯಲಾಗಿದೆ. ಸ್ಥಳೀಯ ಕಾಲಮಾನ ಮುಂಜಾನೆ ಏಳು ಗಂಟೆಯ ವೇಳೆಗೆ […]
↧