ಬ್ರುಸ್ಸೆಲ್ಸ್ : ಫ್ರಾನ್ಸ್‌ನ ಪ್ಯಾರೀಸ್ ನಲ್ಲಿ ಐಸಿಸ್ ಉಗ್ರರು ಅಟ್ಟಹಾಸ ಮೆರೆದ ಬೆನ್ನಲ್ಲೇ ಇದೀಗ ಬೆಲ್ಜಿಯಂನಲ್ಲಿ ಉಗ್ರ ದಾಳಿಯ ಬೆದರಿಕೆ ಹಾಕಲಾಗಿದೆ. ಉಗ್ರರ ಸಂಭಾವ್ಯ ದಾಳಿ ನಡೆಯುವ ಸಾದ್ಯತೆ ಇರುವುದರಿಂದ ಬ್ರುಸ್ಸೆಲ್ಸ್‌ನಲ್ಲಿ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಜನರು ಗುಂಪು ಗೂಡದಂತೆ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಶನಿವಾರ ರಾಜಧಾನಿ ಬ್ರುಸ್ಸೆಲ್ಸ್ ಸೇರಿದಂತೆ ದೇಶಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಸಚಿವರು ,ಪೊಲೀಸರ ಉನ್ನತ ಸಭೆ ನಡೆಸಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ಶಾಪಿಂಗ್ ಮಾಲ್, ರೈಲ್ವೆ ನಿಲ್ದಾಣ. ಬಸ್ ನಿಲ್ದಾಣ […]
↧