ಬಾಗ್ದಾದ್: ಮರುಭೂಮಿಯಲ್ಲಿ ನೀರು ಸಿಗುವುದೇ ಕಷ್ಟ. ಹೀಗಿರುವಾಗ ಆಶ್ಚರ್ಯಕರ ರೀತಿಯಲ್ಲಿ ಇರಾಕಿನ ಮರುಭೂಮಿಯಲ್ಲಿ ಮರಳು ನೀರಿನಂತೆ ಹರಿಯುತ್ತಿರುವುದು ಕಂಡುಬಂದಿದೆ. ಕಳೆದ ವಾರ ಹವಾಮಾನ ವೈಪರಿತ್ಯದಿಂದಾಗಿ ಇರಾಕಿನ ಮರುಭೂಮಿಯಲ್ಲಿ ಆಲಿಕಲ್ಲುಮಳೆ ಸುರಿದಿತ್ತು. ವಿಪರೀತ ಮಳೆಯಿಂದಾಗಿ ಸುರಿದ ಆಲಿಕಲ್ಲು ಇದೀಗ ಮರುಭುಮಿಯಲ್ಲಿ ನೀರಿನಂತೆ ಹರಿಯುತ್ತಿದೆ. ಇದನ್ನು ನೋಡಿದರೆ ನಿಜವಾಗಿಯೂ ಮರಳಿನ ನದಿ ಹರಿಯುತ್ತಿದೆ ಎಂಬಂತೆ ಕಾಣುತ್ತದೆ. ಆದರೆ ಇದು ಮರಳಲ್ಲ ಮಂಜುಗಟ್ಟಿರುವ ಮಳೆನೀರು. ಹರಿಯುತ್ತಿರುವ ನದಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಗಾಲ್ಫ್ ಬಾಲಿನ ಗಾತ್ರದ ಮಂಜಿನ ಗಡ್ಡೆಗಳಿರುವುದು ಗೊತ್ತಾಗುತ್ತದೆ. ಒಣಪ್ರದೇಶದಲ್ಲಿ ಈ […]
↧