ಜಕಾರ್ತ: (ಪಿಟಿಐ): ಇಂಡೊನೇಷ್ಯಾ ದಿಂದ 162 ಜನರನ್ನು ಕರೆದೊಯ್ಯುತ್ತಿದ್ದ ಮಲೇಷ್ಯಾದ ಮತ್ತೊಂದು ವಿಮಾನ ಭಾನುವಾರ ಬೆಳಿಗ್ಗೆ ನಿಗೂಢವಾಗಿ ಕಣ್ಮರೆಯಾಗಿದೆ. ಇಂಡೊನೇಷ್ಯಾದ ಸುರಬಯಾ ವಿಮಾನ ನಿಲ್ದಾಣದಿಂದ ಸ್ಥಳೀಯ ಕಾಲಮಾನ ಬೆಳಗಿನ ಜಾವ 5.20ಕ್ಕೆ ಹೊರಟ ಏರ್ಏಷ್ಯಾ ಖಾಸಗಿ ವಿಮಾನ ಯಾನ ಸಂಸ್ಥೆಗೆ ಸೇರಿದ ವಿಮಾನ (ಕ್ಯುಜಡ್ 8501) ಬೆಳಿಗ್ಗೆ 8.30ಕ್ಕೆ ಸಿಂಗಪುರದ ಚಾಂಗಿ ನಿಲ್ದಾಣ ತಲುಪಬೇಕಿತ್ತು. ವಿಮಾನ ಇಂಡೊನೇಷ್ಯಾದಿಂದ ಹೊರಟ 42 ನಿಮಿಷಗಳಲ್ಲಿ ವಿಮಾನ ಸಂಚಾರ ನಿಯಂತ್ರಣ ಕೇಂದ್ರದ (ಏರ್ ಟ್ರಾಫಿಕ್ ಕಂಟ್ರೋಲ್–ಎಟಿಸಿ) ಸಂಪರ್ಕ ಕಳೆದುಕೊಂಡಿತು. ವಿಮಾನ ಎಲ್ಲಿದೆ […]
↧