ಸಿಂಗಪೂರ್, ಡಿ.5- ಭಾರೀ ಮಳೆಯಿಂದ ತತ್ತರಿಸಿರುವ ತಮಿಳುನಾಡು ಜನತೆಯ ರಕ್ಷಣೆಗಾಗಿ, 75 ಸಾವಿರ ಅಮೆರಿಕನ್ ಡಾಲರ್ಗಳ ದೇಣಿಗೆ ನೀಡಲಾಗಿದೆ ಎಂದು ಸಿಂಗ್ಪೂರ್ ವಿದೇಶಾಂಗ ಖಾತೆ ಸಚಿವ ವಿವಿಯಾನ್ ಬಾಲಕೃಷ್ಣನ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಪತ್ರವನ್ನು ಬರೆದಿರುವ ಬಾಲಕೃಷ್ಣನ್, ತಮಿಳುನಾಡ ಜನತೆಯ ಒಳಿತಿಗಾಗಿ ನಾವು 75 ಸಾವಿರ ಡಾಲರ್ಗಳನ್ನು ನೀಡಲಾಗಿದ್ದು, ನಾವು ಸದಾ ನಿಮ್ಮೊಂದಿಗಿದ್ದೇವೆ, ನೀವೇನೂ ಹೆದರುವ ಅಗತ್ಯವಿಲ್ಲ. ನಿಮ್ಮೊಂದಿಗೆ, ನಿಮ್ಮ ಜನತೆಯೊಂದಿಗೆ ನಾವಿದ್ದೇವೆ ಎಂದು ತಿಳಿಸಿದ್ದಾರೆ. ಮಳೆ ಪ್ರವಾಹಕ್ಕೆ ನೂರಾರು ಜನ ಬಲಿಯಾಗಿರುವುದು ನೋವು ತಂದಿದೆ. […]
↧