ಕರಿಬೇವು ಅಪ್ಪಟ ಭಾರತದ ಮೂಲದ್ದೆಂದು ಹಲವು ಪುರಾಣಗಳಲ್ಲಿ ಪ್ರಸ್ತಾಪಿಸಲಾಗಿದೆ.ಆ ಕಾಲದಿಂದಲೂ ಕರಿಬೇವು ನಮ್ಮ ಪೂರ್ವಜರ ಅಡುಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಇಂದಿಗೂ ನಮ್ಮ ಅಡುಗೆಗಳಲ್ಲಿ ಒಗ್ಗರಣೆಯಿಂದ ಮುಗಿಯದ ಅಡುಗೆಗೆ ರುಚಿಯೇ ಇರುವುದಿಲ್ಲ. ಆರೋಗ್ಯ ಕಾಯಲು ಕರಿಬೇವು ಅತ್ಯಗತ್ಯ. ಇದನ್ನು ದೇಹದಲ್ಲಿರುವ ಟಾಕ್ಸಿಕ್ ಅಂಶಗಳನ್ನು ಹೊರ ಹಾಕಲು ಬಳಸಲಾಗುತ್ತದೆ. ಜೊತೆಗೆ ಇದು ನಿಮ್ಮ ದೇಹದಲ್ಲಿರುವ ಪಿತ್ತವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಅದಲ್ಲದೆ ವಾಂತಿ ಬರುವಂತಾಗುವಿಕೆ ಮತ್ತು ಅಜೀರ್ಣವನ್ನು ಸಹ ನಿವಾರಿಸುತ್ತದೆ. ಏಕೆಂದರೆ ಪಿತ್ತ ಹೆಚ್ಚಾಗಿದ್ದಲ್ಲಿ ನಾಸಿಯಾ ಮತ್ತು […]
↧