ಬಗೋಟಾ: ಇದು ಅಂತಿಂಥ ಹುಡುಕಾಟವಲ್ಲ. ಬರೋಬ್ಬರಿ 300ಕ್ಕೂ ಹೆಚ್ಚು ವರ್ಷಗಳ ಕಾಲ ಮುಳುಗಿದ್ದ ಹಡಗೊಂದರಲ್ಲಿ ಕಡಲತಳ ಸೇರಿದ್ದ ಲಕ್ಷ ಕೋಟಿ ಮೌಲ್ಯದ ಸಂಪತ್ತಿಗಾಗಿ ನಡೆದಿದ್ದ ಹುಡುಕಾಟ. ಹಲವಾರು ದೇಶಗಳ ಹಲವಾರು ತಜ್ಞರು ಇನ್ನಿಲ್ಲದಂತೆ ಕಡಲತಳವನ್ನು ಇದಕ್ಕಾಗಿ ಜಾಲಾಡಿದ್ದರು. 1708ರಲ್ಲಿ ಚಿನ್ನ, ಬೆಳ್ಳಿ ಮತ್ತು ವೈಢೂರ್ಯದ ಅಪಾರ ಸಂಪತ್ತು ತುಂಬಿಕೊಂಡು ಹೊರಟಿದ್ದ ‘ಸ್ಯಾನ್ ಝೆ’ ಹೆಸರಿನ ಬಹುಮಹಡಿ ಹಡಗು, ಕೊಲಂಬಿಯಾದ ಕೆರಿಬಿಯನ್ ಸಮುದ್ರದ ಬಂದರು ಕೋಟೆ ನಗರ ಕಾರ್ಟೆಜೆನಾಕ್ಕೆ ಹತ್ತಿರದ ಐಲಾಸ್ ಡೆಲ್ ರೊಸಾರಿಯೋ ಪ್ರದೇಶದಲ್ಲಿ ಮುಳುಗಿತ್ತು. ಬ್ರಿಟಿಷರ […]
↧