ಫೇಸ್‌ಬುಕ್, ವಾಟ್ಸ್‌ಪ್, ಹೈಕ್ ಇತ್ಯಾದಿ ನೋಡದೆ ದಿನಾ ನಿದ್ದೆಯೇ ಬರೋಲ್ಲ ಎಂಬ ಪರಿಸ್ಥಿತಿ ಈ ಕಾಲದಲ್ಲಿ ಎಲ್ಲರದ್ದೂ ಆಗಿದೆ. ಆದರೆ ನಿದ್ದೆಗೆ ಮುನ್ನ ಫೇಸ್‌ಬುಕ್ ನೋಡಿದರೆ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಗಳಿಸುವ ಅಂಕ ಕಡಿಮೆಯಾಗುತ್ತದೆ ಎಂದು ಸಮೀಕ್ಷೆಯೊಂದು ಹೇಳಿದೆ. ಲಂಡನ್‌ನ ಸಂಶೋಧಕರು ಈ ಸಮೀಕ್ಷೆ ನಡೆಸಿದ್ದು, ನಿದ್ದೆಗೆ ಮುನ್ನ ಸಾಮಾಜಿಕ ಜಾಲತಾಣಗಳನ್ನು ನೋಡುವುದು, ಅದರಲ್ಲೇ ಮೈಮರೆಯುವುದರಿಂದ ಮೆದುಳಿಗೆ ಹೆಚ್ಚಿನ ಪ್ರಚೋದನೆ ನೀಡುತ್ತದೆ. ನಿದ್ದೆ ಕಡಿಮೆಯಾಗಿ ನೆನಪಿನ ಶಕ್ತಿ ಕಡಿಮೆಯಾಗುತ್ತದೆ. ಇದು ಪಠ್ಯ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತದೆ ಎಂದು […]
↧