ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳ ಜೀರ್ಣೋದ್ಧಾರ ನಡೆಸಲು ಇಲ್ಲಿನ ಸರಕಾರ ಮುಂದಾಗಿದೆ. ರಾಷ್ಟ್ರದಲ್ಲಿರುವ ಪುರಾತನ ಹಿಂದೂ ದೇವಾಲಯಗಳಿಗೆ ಯಾತ್ರಾರ್ಥಿಗಳನ್ನು ಆಕರ್ಷಿಸುವ ಉದ್ದೇಶದಿಂದ ಸರಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಇಸ್ಲಾಮಾಬಾದ್ ಸಮೀಪದ ಚಕ್‌ವಾಲ್ ಜಿಲ್ಲೆಯಲ್ಲಿರುವ ಪವಿತ್ರ ಕಟಾಸ್ ರಾಜ್ ದೇವಾಲಯಕ್ಕೆ 124 ಯಾತ್ರಾರ್ಥಿಗಳು ಶುಕ್ರವಾರ ಆಗಮಿಸಿದ್ದು, ಇವರನ್ನು ಪಾಕ್ ಅಧಿಕಾರಿಗಳು ಬರಮಾಡಿಕೊಂಡರು. ದೇವಾಲಯದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಇವಾಕ್ವಿ ಟ್ರಸ್ಟ್ ಪ್ರಾಪರ್ಟಿ ಬೋರ್ಡ್(ಇಟಿಪಿಬಿ)ನ ಮುಖ್ಯಸ್ಥ ಮುಹಮ್ಮದ್ ಸಿದ್ದೀಕುಲ್ ಫಾರೂಕ್, ‘‘ಭಾರತ ಹಾಗೂ ಪಾಕಿಸ್ತಾನ ನಡುವೆ ಉತ್ತಮ ಬಾಂಧವ್ಯ […]
↧