ವಾಷಿಂಗ್ಟನ್, ಡಿ.17- ಪಾಕಿಸ್ತಾನದ ಪರಮಾಣು ಶಕ್ತಿ ಮತ್ತು ಕ್ಷಿಪಣಿ ಕಾರ್ಯಕ್ರಮಗಳ ಕುರಿತಂತೆ ತೀವ್ರ ಆತಂಕ ವ್ಯಕ್ತಪಡಿಸಿರುವ ಅಮೆರಿಕ, ಪರಮಾಣು ಸುರಕ್ಷತೆ ಹಾಗೂ ರಾಜತಾಂತ್ರಿಕ ಸ್ಥಿರತೆಯ ದೃಷ್ಟಿಯಿಂದ ಈ ಬಗ್ಗೆ ಸಂಯಮದಿಂದಿರುವಂತೆ ಇಸ್ಲಾಮಾಬಾದ್‌ಗೆ ಸೂಚಿಸಿದೆ. ಪರಮಾಣು ಶಕ್ತಿ ಬಳಕೆಗೆ ಸಂಬಂಧಿಸಿದಂತೆ ಈ ವಿಷಯದಲ್ಲಿ ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ಅಶಾಂತಿ ಮನೆ ಮಾಡಲು ಕಾರಣವಾಗಿದೆ. ಇದು ಭದ್ರತೆಗೆ ದೊಡ್ಡ ಸವಾಲಾದಂತಾಗಿದೆ. ಆದ್ದರಿಂದ ಪಾಕಿಸ್ತಾನವು ಪರಮಾಣು ಕಾರ್ಯಕ್ರಮ ಮತ್ತು ಕ್ಷಿಪಣಿ ಅಭಿವೃದ್ಧಿಯಲ್ಲಿ ಸಂಯಮದಿಂದ ಇರುವುದು ಒಳ್ಳೆಯದು ಎಂದು ಸೂಚಿಸಿರುವುದಾಗಿ ಅಮೆರಿಕ ತಿಳಿಸಿದೆ.
↧