ಪ್ರಮುಖವಾದ ಸಾಂಬಾರ ಪದಾರ್ಥಗಳಲ್ಲಿ ಶುಂಠಿ ಕೂಡ ಒಂದು. ಒಣಗಿದ ಹಾಗೂ ಹಸಿಶುಂಠಿಗಳೆರಡನ್ನೂ ಸಾಂಬಾರ ಪದಾರ್ಥವಾಗಿ ಬಳಸುತ್ತಾರೆ. ನಮ್ಮ ದೇಹದಲ್ಲಿ ಪಚನಶಕ್ತಿಯನ್ನು ಹೆಚ್ಚಿಸುವ ಇದನ್ನು ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸುತ್ತಾರೆ.ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಶುಂಠಿಯನ್ನು ನಾಗರ, ವಿಶ್ವೌಷಧ ವಿಶ್ವಭೇಷಜ, ಮಹೌಷಧ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಸಂಸ್ಕøತದ ಈ ಹೆಸರುಗಳೇ ಸೂಚಿಸುವಂತೆ ಇದು ಒಂದು ಅಪೂರ್ವ ಔಷಧ ದ್ರವ್ಯ. ಕಟು(ಖಾರ) ರಸವನ್ನು ಹೊಂದಿರುವ ಇದು ಜೀರ್ಣರಸದೊಂದಿಗೆ ಸೇರಿ ಪಚನವಾದಾಗ ಮಧುರ (ಸಿಹಿ)ಭಾವವನ್ನು ಪಡೆಯುವುದರಿಂದ ಇದು ಒಂದು ಶಕ್ತಿವರ್ಧಕವಾಗಿದೆ. ಗುಣದಲ್ಲಿ ಸ್ನಿಗ್ಧ […]
↧