ಸ್ಲೋವೇನಿಯಾ, ಡಿ.21-ಜಗತ್ತಿನಾದ್ಯಂತ ಭಾರೀ ಚರ್ಚೆಯಲ್ಲಿರುವ ಸಲಿಂಗ ವಿವಾಹ ವ್ಯವಸ್ಥೆ ಕುರಿತಂತೆ ನಡೆಸಲಾದ ಜನಾಭಿಪ್ರಾಯ ಸಂಗ್ರಹದಲ್ಲಿ ಸಲಿಂಗ ವಿವಾಹ ಪ್ರಸ್ತಾಪಕ್ಕೆ ಸೋಲುಂಟಾಗಿದೆ. ಸಲಿಂಗ ವಿವಾಹ ಕಾನೂನು ಜಾರಿಯಾಗಬೇಕೆಂಬ ಬೇಡಿಕೆಗೆ ಭಾರೀ ಅಂತರದ ಸೋಲಾಗಿದೆ. ಸ್ಲೋವೇನಿಯಾ ಸರ್ಕಾರ ಈ ವಿಷಯವನ್ನು ಜನರ ಆಯ್ಕೆಗೇ ಬಿಟ್ಟಿತ್ತು. ಅದಕ್ಕಾಗಿ ನಡೆಸಲಾದ ಮತದಾನದಲ್ಲಿ ಪ್ರಸ್ತಾವನೆ ಭಾರೀ ಅಂತರದಿಂದ ಸೋಲು ಕಂಡಿತು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಶೇ.63ರಷ್ಟು ಮತಗಳು ಸಲಿಂಗ ವಿವಾಹದ ವಿರುದ್ಧ ಚಲಾವಣೆಯಾಗಿದ್ದರೆ, ಶೇ.37 ಜನ ವಯಸ್ಕರು (ಪುರುಷ ಅಥವಾ ಮಹಿಳೆ) ಸಲಿಂಗ […]
↧