ಬೀಜಿಂಗ್, ಡಿ.21-ಚೀನಾ ದಕ್ಷಿಣ ಪ್ರಾಂತ್ಯದ ಶೆಂಝೆನ್ನ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಅನೇಕ ಮನೆಗಳು ನೆಲಸಮವಾಗಿದ್ದು, 100ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಗ್ಸಿನ್ಹುವಾ ವರದಿ ತಿಳಿಸಿದೆ. ಇಂದುಮುಂಜಾನೆ ಈ ದುರಂತ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆದಿದೆ. ಸುಮಾರು 60 ಸಾವಿರ ಚದರ ಮೀಟರ್ ಪ್ರದೇಶದಲ್ಲಿದ್ದ 35ಕ್ಕೂ ಹೆಚ್ಚು ಕಟ್ಟಡಗಳು ಕುಸಿದು ಬಿದ್ದಿದ್ದು, ಇಡೀ ಪ್ರದೇಶದಲ್ಲಿ ಕೆಸರಿನ ರಾಡಿ ತುಂಬಿಕೊಂಡಿದೆ. ಕಟ್ಟಡಗಳ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿರುವವರ ರಕ್ಷಣೆಗಾಗಿ ಅಗ್ನಿಶಾಮಕ […]
↧