ಪ್ಯಾರಿಸ್: ಬುಧವಾರ ಚಾರ್ಲಿ ಹೆಬ್ಡೋ ಪತ್ರಿಕೆ ಮೇಲಿನ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರನೋರ್ವ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. 18 ವರ್ಷದ ‘ಹಮೀದ್ ಮೊರಾದ್’ ಎಂಬ ಯುವಕ ತಾನಾಗಿಯೇ ಪ್ಯಾರಿಸ್ ಪೊಲೀಸರಿಗೆ ಶರಣಾಗಿದ್ದು, ಆತನನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ‘ಚಾರ್ಲಿ ಹೆಬ್ಡೋ’ ಪತ್ರಿಕೆ ಮೇಲೆ ನಡೆದ ದಾಳಿ ಸಂಬಂಧ ಪ್ಯಾರಿಸ್ ಪೊಲೀಸರು ಮೂವರ ವಿರುದ್ಧ ಶಂಕೆ ವ್ಯಕ್ತಪಡಿಸಿದ್ದರು. ಈ ಪೈಕಿ ‘ಹಮೀದ್ ಮೋರಾದ್’ ಪೊಲೀಸರಿಗೆ ಶರಣಾಗಿದ್ದು, ತಲೆಮರೆಸಿಕೊಂಡಿರುವ ಇನ್ನಿಬ್ಬರು […]
↧