ಮಧುಮೇಹ ಅಥವಾ ಸಕ್ಕರೆ ಖಾಯಿಲೆ ಇದೆ ಎಂಬ ಸುಳಿವು ದೊರೆತ ಕೂಡಲೇ ಸಿಹಿ ಪದಾರ್ಥ, ತಿಂಡಿ ತಿನಿಸುಗಳನ್ನು ದೂರವಿಡುವ ಮಂದಿ ಹೆಚ್ಚಾಗಿದ್ದಾರೆ. ಆದರೆ, ಸಿಹಿರಹಿತ ಪಾನೀಯಗಳ ಸೇವನೆಯಿಂದಲೂ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರೆ ಹುಬ್ಬೇರಿಸಬೇಡಿ. ರಾಸಾಯನಿಕ ಮತ್ತು ಆಮ್ಲದ ಅಂಶಗಳನ್ನು ಒಳಗೊಂಡಿರುವ ಸಿಹಿರಹಿತ ಪಾನೀಯಗಳನ್ನು ಸೇವಿಸುವುದರಿಂದ ಸುಲಭವಾಗಿ ಹಲ್ಲುಗಳು ಹಾಳಾಗುತ್ತವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. `ಸಕ್ಕರೆ ರಹಿತ’ ಎಂದು ಘೋಷಣೆ ಮಾಡಿಕೊಂಡಿರುವ ವಿವಿಧ ಕಂಪನಿಗಳ ಆಹಾರ ಪದಾರ್ಥಗಳು ಹಾಗೂ ಪಾನೀಯಗಳು ಹೆಚ್ಚಾಗಿ ರಾಸಾಯನಿಕ ಸತ್ವಗಳನ್ನು […]
↧