ಈಜಿಪ್ಟ್ ದೇಶವನ್ನು ಆಳಿದ ಏಕೈಕ ರಾಣಿ ಎನ್ನುವ ಅಗ್ಗಳಿಕೆ ಹಟ್‌ಷೇಪ್‌ಸುಟ್ ರಾಣಿಯದು. ಆಕೆ ತನ್ನ ಆಡಳಿತ ವೈಖರಿ, ಅಂತರರಾಷ್ಟ್ರೀಯ ನೀತಿಗಳ ಕಾರಣದಿಂದ ಮಾತ್ರವಲ್ಲದೆ ಕಲಾಪೋಷಕಿಯಾಗಿ ಕೂಡ ಚರಿತ್ರೆಯಲ್ಲಿ ಸ್ಥಿರಸ್ಥಾಯಿಯಾಗಿದ್ದಾಳೆ. ಈಜಿಪ್ಟ್‌ನ ಫೆರೋಗಳ ಪೈಕಿ ಇಮ್ಮಡಿ ರಾಮ್‌ಸೆಸ್‌ನನ್ನು ಬಿಟ್ಟರೆ ಅತಿ ಹೆಚ್ಚು ದೇವಾಲಯಗಳು ಮತ್ತು ಶಿಲ್ಪಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಹಟ್‌ಷೇಪ್‌ಸುಟ್ ರಾಣಿಯದು. ಆಕೆಯ ಕಾಲದ ಈಜಿಪ್ಟ್ ಸುಭಿಕ್ಷವಾಗಿತ್ತು ಹಾಗೂ ಕಲೆಯ ನೆಲೆಯಾಗಿ ತನ್ನ ವೈಭವದ ದಿನಗಳನ್ನು ಕಂಡಿತು. ಕಿಂಗ್ಸ್ ವ್ಯಾಲಿ ಮತ್ತು ಕ್ವೀನ್ಸ್ ವ್ಯಾಲಿ ಇರುವ ಬೆಟ್ಟಗಳ […]
↧