ಮನಾಮಾ: ಭಯೋತ್ಪಾದನೆ ಜೊತೆ ಧರ್ಮವನ್ನು ಎಂದಿಗೂ ತಳಕುಹಾಕಬೇಡಿ ಎಂದು ಹೇಳಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಭಯೋತ್ಪಾದನೆಯೆಂಬ ಪಿಡುಗನ್ನು ತಳ ಮಟ್ಟದಿಂದ ಕಿತ್ತುಹಾಕಲು ಭಾರತ ಮತ್ತು ಅರಬ್ ರಾಷ್ಟ್ರಗಳು ಕೈ ಜೋಡಿಸಬೇಕು. ಯಾರಾದರೂ ಉಗ್ರಗಾಮಿಗಳಿಗೆ ಮೌನವಾಗಿ ಪ್ರೋತ್ಸಾಹ ನೀಡುತ್ತಿದ್ದರೆ ಅಂತವರು ಅವರ ಅಂತ್ಯವನ್ನು ಕಾಣಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಬಹ್ರೈನ್ ರಾಜಧಾನಿ ಮನಾಮಾದಲ್ಲಿ ಮೊದಲ ಭಾರತ-ಅರಬ್ ಸಹಕಾರ ವೇದಿಕೆಯ ಮೊದಲ ಸಚಿವರ ಸಭೆಯಲ್ಲಿ ಮಾತನಾಡಿದ ಅವರು, ಅರಬ್ ರಾಷ್ಟ್ರಗಳೊಂದಿಗೆ ಭಾರತ ಸ್ನೇಹ ಬೆಳೆಸುತ್ತಿರುವುದು ಒಂದು ಮಹತ್ವದ ತಿರುವು. […]
↧