ಲಂಡನ್ (ಪಿಟಿಐ): ಸ್ಫೋಟಕ ಮಾಹಿತಿಗಳ ಬಹಿರಂಗದ ಮೂಲಕ ಸಂಚಲನ ಸೃಷ್ಟಿಸಿದ್ದ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜೆ ಅವರು ಗುರುವಾರ “ಷರತ್ತು ಬದ್ಧ” ಶರಣಾಗತಿಯ ಇಂಗಿತ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಇಲ್ಲಿನ ಈಕ್ವೇಡಾರ್ ರಾಜತಾಂತ್ರಿಕ ಕಚೇರಿಯಲ್ಲಿ ನೆಲೆಸಿರುವುದು ‘ಅಕ್ರಮ ವಶ’ ಅಲ್ಲ ಎಂದು ವಿಶ್ವಸಂಸ್ಥೆಯ ಸಮಿತಿಯು ಘೋಷಿಸಿದರೆ, ಶುಕ್ರವಾರ ಮಧ್ಯಾಹ್ನವೇ ಬ್ರಿಟನ್ ಪೊಲೀಸರಿಗೆ ಶರಣಾಗುವೆ ಎಂದು ಪ್ರಕಟಿಸಿದ್ದಾರೆ. ‘ಇಂಗ್ಲೆಂಡ್ ಹಾಗೂ ಸ್ವಿಡನ್ ವಿರುದ್ಧದ ಪ್ರಕರಣಗಳಲ್ಲಿ ಸೋಲು ಕಂಡಿರುವುದಾಗಿ ವಿಶ್ವಸಂಸ್ಥೆ ನಾಳೆ ಪ್ರಕಟಿಸಿದರೆ, ನಾನು ಶುಕ್ರವಾರ ಮಧ್ಯಾಹ್ನವೇ ರಾಜತಾಂತ್ರಿಕ […]
↧