ವಾಷಿಂಗ್ಟನ್ (ಪಿಟಿಐ): ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಗಳ ಆಯ್ಕೆಯ ಪ್ರಾಥಮಿಕ ಸುತ್ತಿನ ನ್ಯೂ ಹ್ಯಾಂಪ್‌ಷೈರ್ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್, ಬೆರ್ನಿ ಸ್ಯಾಂಡರ್ಸ್ ವಿರುದ್ಧ ಭಾರಿ ಅಂತರದ ಸೋಲಿನ ಆಘಾತ ಅನುಭವಿಸಿದ್ದಾರೆ. ಅಯೊವಾ ಕಾಕಸಸ್‌ನಲ್ಲಿ ಪ್ರಯಾಸಕರ ಗೆಲುವು ಕಂಡಿದ್ದ ಹಿಲರಿ ಕ್ಲಿಂಟನ್ ನ್ಯೂ ಹ್ಯಾಂಪ್‌ಷೈರ್‌ನಲ್ಲಿ ಮುಖಭಂಗ ಅನುಭವಿಸಿದ್ದಾರೆ. ಬೆರ್ನಿ ಸ್ಯಾಂಡರ್ಸ್ ಅವರಿಗೆ ಶೇ 59ರಷ್ಟು ಮತಗಳು ಲಭಿಸಿದರೆ ಹಿಲರಿ ಕ್ಲಿಂಟನ್‌ಗೆ ಶೇ 38ರಷ್ಟು ಮತಗಳು ಬಿದ್ದಿವೆ. ಮೊದಲ ಸುತ್ತಿನಲ್ಲಿ ಸೋಲು ಕಂಡಿದ್ದ ರಿಪಬ್ಲಿಕನ್ […]
↧