ಇದು ನೆಟ್ ಯುಗ. ಬೆಳಿಗ್ಗೆ ಏಳುವುದರಿಂದ ರಾತ್ರಿ ಮಲಗುವವರೆಗೂ ಅಂತರ್ಜಾಲವಿಲ್ಲದೆ ಬದುಕಲು ಸಾಧ್ಯವೇ ಇಲ್ಲ ಎಂಬಂಥ ಸಂಕೀರ್ಣ ಚೌಕಟ್ಟನ್ನು ಕಟ್ಟಿಕೊಳ್ಳುವ ಕಾಲ. ಸಂಬಂಧಗಳಿಗೂ ‘ನೆಟ್’ ಬೆಸುಗೆ ಬಂದು ದಶಕಗಳೇ ಕಳೆದಿವೆ. ಪ್ರೀತಿಯಲ್ಲಿ ಇರೋ ಸುಖವನ್ನು ನೆಟ್‌ನಲ್ಲಿಯೇ ಕಂಡು, ನೆಟ್‌ನಲ್ಲಿಯೇ ಮರೆಯುವುದರಲ್ಲಿ ಈಗಿನ ಪೀಳಿಗೆ ಬಹಳ ಮುಂದು. ಆನ್‌ಲೈನ್‌ನಲ್ಲಿಯೇ ಪ್ರೀತಿ ಹುಟ್ಟುತ್ತದೆ. ಆನ್‌ಲೈನ್‌ನಲ್ಲಿಯೇ ಡೇಟಿಂಗ್, ಅಲ್ಲಿಯೇ ಮದುವೆ, ಕೊನೆಗೆ ಅಲ್ಲಿಯೇ ವಿಚ್ಛೇದನವನ್ನೂ ಪಡೆಯುತ್ತಾರೆ. ಈ ಡೇಟಿಂಗ್‌ನ ಮೂಲ ಚಾಟಿಂಗ್ ಆದರೂ, ಇದು ಮೊದಲು ಶುರುವಾಗುವುದು ಪುರುಷರಿಂದಲೇ. ಡೇಟಿಂಗ್‌ಗೆ ಸಿದ್ಧ […]
↧