ಲಂಡನ್: ನಾಲ್ಕು ವರ್ಷದ ಬ್ರಿಟನ್ ನ ಬಾಲಕನೊಬ್ಬ ಕಾರನ್ನು ಸ್ಫೋಟಿಸಿ ಮೂವರನ್ನು ಸಾಯಿಸುವ ದೃಶ್ಯ ಇಸಿಸ್ ಉಗ್ರಗಾಮಿ ಸಂಘಟನೆ ಬಿಡುಗಡೆ ಮಾಡಿರುವ ಹೊಸ ಗ್ರಾಫಿಕ್ ವಿಡಿಯೋದಲ್ಲಿ ದಾಖಲಾಗಿದೆ. ಈತ ಸಿರಿಯಾಕ್ಕೆ ಬೇಹುಗಾರಿಕೆ ನಡೆಸುತ್ತಿದ್ದ ಎಂಬ ಆರೋಪವಿದೆ. ಕ್ರಿಸ್ತಿಯನ್ ಆಗಿದ್ದು ಮುಸಲ್ಮಾನಳಾಗಿ ಮತಾಂತರಗೊಂಡ ಗ್ರೇಸ್ ಖಾದಿಜಾ ದರೆ ಎಂಬಾಕೆಯ ಪುತ್ರನು ಈ ಬಾಲಕನಾಗಿದ್ದು, ಆಗ್ನೇಯ ಲಂಡನ್ ನಲ್ಲಿದ್ದ ಈಕೆ 2012ರಲ್ಲಿ ಸಿರಿಯಾಗೆ ಓಡಿಹೋಗಿ ಸ್ವೀಡನ್ ನ ಭಯೋತ್ಪಾದಕ ಹೋರಾಟಗಾರ ಅಬು ಬಕ್ರ್ ಎಂಬಾತನನ್ನು ಮದುವೆಯಾಗಿದ್ದಳು. ನಂತರ ಆಕೆ ಹತ್ಯೆಗೀಡಾಗಿದ್ದಳು. […]
↧