ಮೈದುಗುರಿ, ಫೆ.11-ಬೊಕೊ ಹರಾಮ್ ಉಗ್ರರ ಅಟ್ಟಹಾಸದಲ್ಲಿ ಸಿಕ್ಕು ನೊಂದು, ಮನೆ-ಊರು ತೊರೆದು ನಿರಾಶ್ರಿತ ಶಿಬಿರದಲ್ಲಿದ್ದ 60ಕ್ಕೂ ಹೆಚ್ಚು ಮಂದಿಯನ್ನು ಮಹಿಳಾ ಬಾಂಬರ್‌ಗಳಿಬ್ಬರು ಬಲಿ ತೆಗೆದುಕೊಂಡಿದ್ದಾರೆ. ಈಶಾನ್ಯ ನೈಜೀರಿಯದ ದಿಕ್ವಾದಲ್ಲಿರುವ ನಿರಾಶ್ರಿತರ ಶಿಬಿರದ ಮೇಲೆ ನಿನ್ನೆ ರಾತ್ರಿ ಇಬ್ಬರು ಮಹಿಳಾ ಬಾಂಬರ್‌ಗಳು ದಾಳಿ ಮಾಡಿ ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದಾರೆ. ಈ ಬಾಂಬ್ ದಾಳಿಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 60ಕ್ಕೂ ಹೆಚ್ಚಿನ ಸಂಖ್ಯೆಯ ಜನ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ಮೈದುಗುರಿ ರಾಜಧಾನಿ ಬೋರ್ನೊದಿಂದ ಸುಮಾರು 90ಕಿ.ಮೀ. ದೂರದಲ್ಲಿರುವ ದಿಕ್ಸಾ ಬೊಕೊ […]
↧