ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ಕ್ರಿಕೆಟ್ ದಿಗ್ಗಜ ಮಾರ್ಟಿನ್ ಕ್ರೋವ್ (53) ಗುರುವಾರ ನಿಧನರಾಗಿದ್ದಾರೆ. ಅವರು ಕ್ಯಾನ್ಸರ್‌ನಿಂದ (ಲಿಂಫೋಮ) ಬಳಲುತ್ತಿದ್ದರು. 1982ರಿಂದ 1995ರವರೆಗೆ 77 ಟೆಸ್ಟ್ ಪಂದ್ಯಗಳನ್ನಾಡಿದ್ದ ಕ್ರೋವ್ 5,444 ರನ್ ಗಳಿಸಿದ್ದರು. ಏಕದಿನ ಪಂದ್ಯಗಳಲ್ಲಿ 4,704 ರನ್‌ಗಳನ್ನು ಕ್ರೋವ್ ತಮ್ಮದಾಗಿಸಿಕೊಂಡಿದ್ದರು. 2012ರಿಂದ ಅವರು ಲಿಂಫೋಮಗೆ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ವರ್ಷ ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿತ್ತು. 14 ವರ್ಷಗಳ ಕಾಲ ನ್ಯೂಜಿಲೆಂಡ್ ಕ್ರಿಕೆಟ್ ಟೀಮ್ ನಲ್ಲಿ ಕ್ರೋವ್ ಅನಭಿಷಕ್ತ ದೊರೆಯಾಗಿ ಮೆರೆದಿದ್ದರು. ಕ್ರೋವ್ ನಿಧನಕ್ಕೆ ಅಸಂಖ್ಯ ಕ್ರೀಡಾಭಿಮಾನಿಗಳು […]
↧