ಮೊದಲಿಗೆ ಆಫ್ಘನ್ ಕುಟುಂಬಗಳ ಮನೆಗಳ ಮೇಲೆ ಲಾಠಿ ಹಿಡಿದ ಪೊಲೀಸರಿಂದ ದಾಳಿ ನಡೆಯಿತು. ಬಳಿಕ ಮನೆಗಳಲ್ಲಿದ್ದ ಜನರನ್ನು ಜೈಲಿಗೆ ತಳ್ಳಲಾಯಿತು. ಸಂಬಂಧಿಕರು ಲಂಚ ಕೊಟ್ಟ ಮೇಲಷ್ಟೇ ಅವರನ್ನು ಬಿಡುಗಡೆಗೊಳಿಸಲಾಯಿತು. ಲಂಚ ಕೊಡಲು ಅವರಲ್ಲಿ ಏನೂ ಉಳಿದಿಲ್ಲ ಎಂದಾಗ ಪಾಕಿಸ್ತಾನದಿಂದ ಶಾಶ್ವತವಾಗಿ ಕಾಲು ಕೀಳಬೇಕು ಮತ್ತು ಆಫ್ಘಾನಿಸ್ತಾನಕ್ಕೆ ತೆರಳಬೇಕು ಎಂದು ತಿಳಿಸಲಾಯಿತು. ಆಫ್ಘಾನಿಸ್ತಾನ ಅವರೆಲ್ಲರ ಅಧಿಕೃತ ದೇಶ. ಆದರೆ ಅಲ್ಲಿ ತಲೆಮಾರುಗಳಿಂದ ನಡೆಯುತ್ತಿರುವ ಸಂಘರ್ಷಗಳಿಂದ ನಿರಾಶ್ರಿತರಾದ ಹಲವರಿಗೆ ಆಫ್ಘಾನಿಸ್ತಾನ ಎಂಬುದು ಇಂದು ವಿದೇಶಿ ನೆಲ. ಕಳೆದ ಡಿಸೆಂಬರ್ನಲ್ಲಿ ಪೆಶಾವರದಲ್ಲಿನ […]
↧