‘ನಿನ್ನ ಅಳಿಯನಿಗೆ ಕರ್ಚೀಫ್ ಬೇಕಂತೆ ತರ್ತೀಯಾ?’– ಮಗಳು ಕೇಳಿದಾಗ ನನಗೆ ಸಂತೋಷ, ಆಶ್ಚರ್ಯ ಮತ್ತು ಕುತೂಹಲ. ಸಂತೋಷ ಏಕೆಂದರೆ ಮದುವೆ ಸೇರಿದಂತೆ ಇದುವರೆಗೂ ಏನೂ ನನ್ನಿಂದ ಕೇಳಿರದಿದ್ದ ಅಳಿಯ ಈಗ ಕರ್ಚೀಫಾದರೂ ಕೇಳಿದನಲ್ಲ ಎಂಬುದಕ್ಕೆ; ಆಶ್ಚರ್ಯ ಏಕೆಂದರೆ– ಅಮೆರಿಕದಲ್ಲಿ ಕರ್ಚೀಫ್ ದೊರೆಯದೆ? ಕುತೂಹಲ ಎಂದರೆ, ಕರ್ಚೀಫ್ ಬದಲು ಅಲ್ಲಿನ ಜನ ಏನು ಬಳಸುತ್ತಾರೆ ಎಂಬುದು. ಮಗಳ ಆಹ್ವಾನದ ಮೇಲೆ ನ್ಯೂಯಾರ್ಕ್ ತಲುಪಿ, ಅಲ್ಲಿ ಅಡ್ಡಾಡಿದ ಮೇಲೆ ತಿಳಿಯಿತು ಈ ಕರ್ಚೀಫಿನ ಮಹತ್ವ. ಏಕೆಂದರೆ ಅಮೆರಿಕನ್ನರಿಗೆ ಅದರ ಅವಶ್ಯಕತೆಯೇ […]
↧