ನವದೆಹಲಿ (ಪಿಟಿಐ): ತಂತ್ರಜ್ಞರು ಮತ್ತು ವೃತ್ತಿಪರರಿಗೆ ಅಮೆರಿಕದಲ್ಲಿ ಉದ್ಯೋಗ ದೊರಕಿಸಿಕೊಡುವ ಎಚ್–1 ಬಿ ವೀಸಾ ತೆಗೆದುಹಾಕಬೇಕೆಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿರುವುದಕ್ಕೆ ಭಾರತ ಆತಂಕ ವ್ಯಕ್ತಪಡಿಸಿದೆ. ‘ಇಂತಹ ನಿರ್ಧಾರವು ರಫ್ತು ಆಧರಿಸಿದ ಪ್ರಗತಿ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ’ ಎಂದು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಶನಿವಾರ ಇಲ್ಲಿ ನಡೆದ ಅಂತರರಾಷ್ಟ್ರೀಯ ಹಣಕಾಸು ನಿಧಿ ಕಾರ್ಯಕ್ರಮದಲ್ಲಿ ಹೇಳಿದರು. ಭಾರತದಂತಹ ದೇಶಗಳ ತಂತ್ರಜ್ಞರಿಗೆ ಉದ್ಯೋಗ ವೀಸಾ ನೀಡುತ್ತಿದ್ದ ಅಮೆರಿಕದ ಎಚ್–1 ಬಿ ಕಾರ್ಯಕ್ರಮವನ್ನೇ […]
↧